logo

ಸಾಹಿತಿ ಡಾ.ಎನ್. ಮುನಿಕೆಂಪಣ್ಣ ನಿಧನಕ್ಕೆ ಸಂತಾಪ ಕಸಾಪ ವತಿಯಿಂದ ಶ್ರದ್ಧಾಂಜಲಿ

ವರದಿ: ಹೈದರ್ ಸಾಬ್
hai.dhl562110@gmail.com

ದೇವನಹಳ್ಳಿ: ಹಿರಿಯ ರಂಗಭೂಮಿ ಕಲಾವಿದರು, ಕ್ರೀಡಾಪಟು, ಸಾಹಿತಿ, ನಿವೃತ್ತ ಉಪನ್ಯಾಸಕರು, ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು, ದೇವನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 28ನೇ
ಸಮ್ಮೇಳನ ಅಧ್ಯಕ್ಷರು ಆದ ಕೀರ್ತಿ ಮುನಿಕೆಂಪಣ್ಣನವರಿಗೆ ಸಲ್ಲಿಸಬೇಕಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ದೇವನಹಳ್ಳಿ ಪಟ್ಟಣದ ಜಿಲ್ಲಾ ಕಸಾಪ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂತಾಪ ಸೂಚನಾ ಕಾರ್ಯಕ್ರಮದಲ್ಲಿ ದಿವಾಂಗತ ಮುನಿಕೆಂಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ಮಾತನಾಡಿದರು.

ಜಾಲಾ ಹೋಬಳಿ ಸಾತನೂರು ಗ್ರಾಮದಲ್ಲಿ ನಡೆದ ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ ನಾಟಕದಲ್ಲಿ ಶಕುನಿಯ ಪಾತ್ರವನ್ನು ಅಭಿನಯಿಸುವಾಗ ಹೃದಯಘಾತದಿಂದ ದೈವಾಧೀನರಾಗಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರು ಆಗಿ ಆಯ್ಕೆ ಆಗಿ ನಮ್ಮೊಡನೆ ಇದ್ದ ಸಂದರ್ಭ ಮರೆಯಲು ಸಾಧ್ಯವೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಈ ವೇಳೆ ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮುನಿರಾಜು (ಅಪ್ಪಯ್ಯ), ತಾಲೂಕು ಅಧ್ಯಕ್ಷ ನಂಜೇಗೌಡ, ಶ್ರೀರಾಮಯ್ಯ ಸಂತಾಪ ಸೂಚನಾ ಸಭೆಯಲ್ಲಿ ಮುನಿಕೆಂಪಣ್ಣ ಒಡನಾಟವನ್ನು ಮೆಲುಕು ಹಾಕುವುದರ ಮೂಲಕ ತಮ್ಮ ನೋವು ತೋಡಿಕೊಂಡರು.

ಇದೇ ಸಂದರ್ಭದಲ್ಲಿ ಕಸಾಪ ದೇವನಹಳ್ಳಿ ತಾಲೂಕು ಕೋಶಾಧ್ಯಕ್ಷ ಹೊನ್ನವಳ್ಳಿ ರಾಮಾಂಜಿನಪ್ಪ, ಸುರೇಶಾಚಾರ್, ಗೌರವ ಕಾರ್ಯದರ್ಶಿ ಯಲಿಯೂರು ದೇವರಾಜ್, ಡಾ.ವೆಂಕಟರಾಜು, ಶರಣಯ್ಯಹೀರೆಮಟ್, ಅನಿಲ್ ಕುಮಾರ್, ಐ.ಟಿ.ರಾಮಾಂಜಿನಪ್ಪ, ಹಾರೋಹಳ್ಳಿ ಮಂಜುನಾಥ್, ರಾಮಣ್ಣ, ಭೈರೇಗೌಡ, ಸುಬ್ರಹ್ಮಣ್ಯ, ಗೋವಿಂದರಾಜು, ಪದಾಧಿಕಾರಿಗಳು ಇದ್ದರು.

3
484 views